Sunday, September 13, 2009

ಪ್ರೀತಿ ಅಂದ್ರೆ…..?

ನಿನ್ನೆ ಸಾಯಂಕಾಲ ಮನೆಗೆ ಹೋಗಿ ಹೊರಗಡೆ ಬರುತ್ತಿದ್ದ ಹನಿ ಹನಿ ಮಳೆಯನ್ನೇ ನೋಡುತ್ತಾ ನಿಂತಿದ್ದೆ. ಆಗ ನನ್ನ ಎಂದಿನ ಕೆಲವು ಪ್ರಶ್ನೆಗಳಂತೆ "ಪ್ರೀತಿ ಅಂದ್ರೆ…..?" ಅನ್ನೋದು ತಲೆ ಸೇರಿಕೊಂಡು ಕೊರೆಯತೊಡಗಿತು. ನನಗೆ ಇದೇನು ಹೊಸದಲ್ಲ, ಎಷ್ಟೋ ಸಾರಿ ಪ್ರೀತಿ ಅಂದ್ರೆ…..? ಅಂತ ಯೋಚನೆ ಮಾಡಿದ್ದೀನಿ, ಆದ್ರೆ ಸರಿಯಾದ ಉತ್ತರ ಸಿಕ್ಕಿಲ್ಲ.

'ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ' ಅಂತ ಒಬ್ರು ಹೇಳಿದಾರೆ , 'ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು' ಅಂತನೂ ಹೇಳಿದಾರೆ. ಆದ್ರೆ ಪ್ರೀತಿ ಅಂದ್ರೆ ಏನು ಅಂತ ಅವ್ರು ಕರೆಕ್ಟ್ ಆಗಿ ಹೇಳಲೇ ಇಲ್ಲ. ಎಷ್ಟೋ ಜನ ಕವಿಗಳು, ಸಾಹಿತಿಗಳು ಪ್ರೀತಿ ಪ್ರೇಮದ ಬಗ್ಗೆ ಬಹಳಷ್ಟು ಕವನ, ಕಥೆ, ಕಾದಂಬರಿಗಳನ್ನೇ ಬರೆದು ಪ್ರಶಸ್ತಿ ತಗೊಂಡಿದಾರೆ. ಅವರನ್ನೂ ಒಂದು ಸಲ ಕೇಳಿ ನೋಡಿ, ಹಾಗಂದ್ರೆ ಏನು ಅಂತ, ಅವರಿಗೂ ಸರಿಯಾಗಿ ಹೇಳೋಕೆ ಆಗಲ್ಲ. ಅವ್ರು ಎನಾದ್ರು ಹೇಳಿದ್ರೂ ಅದು ನಿಮಗೆ ಇಷ್ಟ ಆಗ್ದೇನೆ ಇರಬಹುದು.

ಹೋಗ್ಲಿ ಇವರೆಲ್ಲಾ ಬೇಡ ಪ್ರೀತಿ ಮಾಡೋರನ್ನೇ ಕೇಳಿದ್ರೆ ಅವ್ರು ಸರಿಯಾಗಿ ಹೇಳಲ್ಲ , ಸುಮ್ನೆ ಲವ್ ಮಾಡ್ತಿದಿವಿ ಅಂತಾರೆ. ಹಾಗಂದ್ರೆ ಏನು ಅಂತ ಯೋಚನೇನೆ ಮಾಡಿರಲ್ಲ.ಪ್ರೀತಿ ಮಾಡಿ ಬೇರೆಯಾದವರನ್ನ ಹಾಗಂದ್ರೆ ಏನು ? ನೀವು ಇಷ್ಟು ದಿನ ಪ್ರೀತಿ ಮಾಡಿ ಇವಾಗ ಯಾಕೆ ಬೇರೆಯಾಗಿದ್ದೀರಿ ಅಂದ್ರೆ ಅವ್ರು ಏನೂ ಹೇಳೋಲ್ಲ. ಅಂದ್ರೆ ಇಲ್ಲಿ ಪ್ರೀತಿ ಸತ್ತೋಯ್ತಾ ? ಪ್ರೀತಿ ಸಾಯುತ್ತಾ ? ಸಯೋದಕ್ಕೂ ಮೊದಲು ಅದಕ್ಕೆ ಜೀವ ಇತ್ತಾ ? ಹೀಗೆ ಎಷ್ಟೋ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಎಷ್ಟೋ ಜನ ಏನೇನೋ ಮಾಡ್ತಿರ್ತಾರೆ, ನಾವು ಮಾಡ್ತಿರೋದು ಲವ್, ಪ್ರೀತಿ ಅನ್ಕೊಂಡಿರ್ತಾರೆ. ಇನ್ ಕೆಲವರು ನಿಜವಾಗ್ಲೂ ಪ್ರೀತಿ ಮಾಡ್ತಿರ್ತಾರೆ, ಆದ್ರೆ ಅವರಿಗೇ ಒಂದೊಂದುಸಲ ನಂಬಿಕೆ ಬರಲ್ಲ ಅದು ಪ್ರೀತಿನಾ, ಏನು? ಅಂತ. ಅದಕ್ಕೆ ಹೇಳ್ತಾ ಇದೀನಿ ಲವ್ ಮಾಡ್ತಿರೋರು, ಮಾಡ್ಬೇಕು ಅನ್ಕೊಂಡಿರೋರು, ಲವ್ ಮಾಡಿ ಬೇರೆಯಾದೋರು ಎಲ್ಲರೂ ಒಂದು ಸಲ ಯೋಚನೆ ಮಾಡಿ ಪ್ರೀತಿ ಅಂದ್ರೆ ಏನು ಅಂತ….
ಅದಕ್ಕೆ ಉತ್ತರ ಒಂದೇ ಲೈನ್ ನಲ್ಲಿ ಹೇಳೋದು ಕಷ್ಟ ಅನ್ಸುತ್ತೆ , ಆದ್ರೂ ಏನಾದ್ರೂ ಗೊತ್ತಾದ್ರೆ ಪ್ಲೀಸ್ ನನಗೂ ಹೇಳ್ತೀರಾ ತಾನೇ….?

4 comments:

  1. Le manu, chennagi bardiddiya. Aadre, ninna prashnege uttaravilla :)

    ReplyDelete
  2. Preethi andre friend kano.. Very simple..

    ReplyDelete
  3. preethi andre obbarannobbaru arhta madkondu avr kasta sukhagalige bhagiyagi avar jothe irode preethi.

    ReplyDelete
  4. preethi andre nambike, sambandagala thalapaaya....

    ReplyDelete